ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

 .             

 

ಕನಾ೯ಟಕ ರಾಜ್ಯ ಹಣಕಾಸು ಸಂಸ್ಥೆಯು 1951ರ ರಾಜ್ಯ ಹಣಕಾಸು ಸಂಸ್ಥೆಯ ಕಾಯಿದೆಯ ಅನ್ವಯ 1959ರಲ್ಲಿ ಸ್ಥಾಪಿತವಾಗಿದೆ. 1973 ರ ಮೊದಲು ಕನಾ೯ಟಕ  ರಾಜ್ಯ ಹಣಕಾಸು ಸಂಸ್ಥೆಯನ್ನು, ಮೈಸೂರು ರಾಜ್ಯ ಹಣಕಾಸು ಸಂಸ್ಥೆ ಎಂದು ಗುರುತಿಸಲಾಗುತಿತ್ತು. ಕನಾ೯ಟಕ ರಾಜ್ಯ ಹಣಕಾಸು ಸಂಸ್ಥೆಯು ರಾಜ್ಯದಲ್ಲಿ ಹೊಸ ಕಿರು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳನ್ನು ಸ್ಥಾಪಿಸಲು ಹಾಗೂ ಸ್ಥಾಪಿತವಾಗಿರುವ ಉದ್ದಿಮೆಗಳ ವಿಸ್ತರಣೆ, ಆಧುನಿಕರಣ ಮತ್ತು ವೈವಿಧ್ಯೀಕರಣಗೊಳಿಸಲು ದೀಘಾ೯ವಧಿಯ ಸಾಲವನ್ನು ನೀಡುತ್ತಿದೆ. ಸಂಸ್ಥೆಯು ಕೈಗಾರಿಕಾ ಕ್ಷೇತ್ರದಲ್ಲಿ ಪ್ರಾದೇಶಿಕ ಅಭಿವೃದ್ಧಿಯ ಸಮತೋಲನ, ಮಹಿಳಾ ಸಬಲೀಕರಣ, ಮೊದಲ ಪೀಳಿಗೆ ಉದ್ದಿಮೆದಾರರು ಮತ್ತು ಸಾಮಾಜಿಕವಾಗಿ ಹಿಂದುಳಿದ ವಗ೯ಗಳ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ.

ಕನಾ೯ಟಕ ರಾಜ್ಯ ಹಣಕಾಸು ಸಂಸ್ಥೆಯು 1959ರಲ್ಲಿ 11ಉದ್ದಿಮೆಗಳಿಗೆ 28.೦೦ ಲಕ್ಷ ಸಾಲ ಮಂಜೂರಾತಿ ನೀಡುವ ಮೂಲಕ ಪ್ರಾರಂಭವಾಗಿದ್ದು, ಇಲ್ಲಿಯವರೆವಿಗೂ 19,680.73ಕೋಟಿ ರೂ.ಗಳಿಗೂ ಹೆಚ್ಚಿನ ನೆರವನ್ನು 1,75,833 ಘಟಕಗಳಿಗೆ ನೀಡಿರುತ್ತದೆ. ಇವುಗಳಲ್ಲಿ ಶೇ.90 ಕ್ಕೂ ಹೆಚ್ಚಿನ ನೆರವನ್ನು ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ನೀಡಲಾಗಿದೆ. ಅಲ್ಲದೆ, ಸಂಸ್ಥೆಯು ಸ್ಥಾಪಿಸಿದ ದಿನಾಂಕದಿಂದ ಮಾರ್ಚ್ 31,2023 ಅಂತ್ಯದವರೆಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 22,362 ಉದ್ಯಮಿಗಳಿಗೆ 2762.72 ಕೋಟಿ ರೂಗಳಿಗೂ ಅಧಿಕ ಸಾಲಗಳ ಮಂಜೂರಾತಿ ನೆರವನ್ನು ನೀಡಿರುತ್ತದೆ, ಹಾಗೂ 31,448 ಕ್ಕೂ ಹೆಚ್ಚಿನ ಮಹಿಳಾ ಉದ್ಯಮಿದಾರರಿಗೆ 4,859.86 ಕೋಟಿ ರೂ ಗಳ ಸಾಲ ಮಂಜೂರಾತಿ ಮಾಡಿದೆ.ಮತ್ತು 41,265 ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತ ಉದ್ಯಮಿಗಳಿಗೆ ಸುಮಾರು 1,906.55 ಕೋಟಿ ರೂಗಳ ಸಾಲ ಮಂಜೂರಾತಿ ನೆರವನ್ನು ಒದಗಿಸಿದೆ.

ರಾಜ್ಯ ಸರ್ಕಾರದ ಬೆಂಬಲದೊಂದಿಗೆ ರೂಪಿತವಾದ ಬಡ್ಡಿ ಸಹಾಯಧನ ಯೋಜನೆಗಳಲ್ಲಿ, ಮಹಿಳಾ ಉದ್ಯಮಿಗಳಿಗೆ 1,048.48 ಕೋಟಿ ರೂ.ಗಳ ಸಂಚಿತ ನೆರವನ್ನು 1,357 ಮಹಿಳಾ ಉದ್ಯಮಿಗಳಿಗೆ ಒದಗಿಸಲಾಗಿದೆ. ಹಾಗೆಯೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 3,724 ಉದ್ಯಮಿಗಳಿಗೆ 2,228.84 ಕೋಟಿ ರೂ.ಗಳ ಸಂಚಿತ ನೆರವನ್ನು ನೀಡಲಾಗಿದೆ. ಸೂಕ್ಷ್ಮ ಮತ್ತು ಸಣ್ಣ ಗಾತ್ರದ ಘಟಕಗಳಿಗೆ ಬಡ್ಡಿ ಸಹಾಯಧನ ಯೋಜನೆಯಡಿಯಲ್ಲಿ 1,199 ಉದ್ಯಮಗಳಿಗೆೆ 1,362.18 ಕೋಟಿ ರೂ.ಗಳ ಸಂಚಿತ ನೆರವನ್ನು ನೀಡಲಾಗಿದೆ.

ಹಲವು ಮೊದಲ ಪೀಳಿಗೆ ಉದ್ದಿಮೆದಾರರು ಸಂಸ್ಥೆಯ ನೆರವಿನಿಂದ ತಮ್ಮ ಉದ್ಯಮಗಳನ್ನು ಸ್ಥಾಪಿಸಿದ್ದು, ಅವುಗಳಲ್ಲಿ ಮುಖ್ಯವಾಗಿ INFOSYS, BIOCON, MTR Foods, Reva Electric Cars,Narayana Nethralaya,Jungle Lodges and Resorts-Kabini ಮೊದಲಾದವರು ಯಶಸ್ವಿಯಾಗಿ ಉದ್ಯಮವನ್ನು ಅಭಿವೃದ್ಧಿಗೊಳಿಸಿ ಕನಾ೯ಟಕವನ್ನು ವಿಶ್ವ ಭೂಪಟದಲ್ಲಿ ಗುರುತಿಸುವಂತೆ ಮಾಡಿವೆ.

ಸಂಸ್ಥೆಯು ಸಣ್ಣ ಕೈಗಾರಿಕೆಗಳ ಅಭಿವೃದ್ದಿಗಾಗಿ ಕನಾ೯ಟಕದಲ್ಲಿ ಕಾಯ೯ನಿವ೯ಹಿಸುತ್ತಿದ್ದು ರಾಜ್ಯ ಸಕಾ೯ರದ ಅಭಿವೃದ್ಧಿ ಯೋಜನೆಗಳನ್ನು ಕಿರು, ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ ವಗಾ೯ಯಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ.

                                                                          

 

ಇತ್ತೀಚಿನ ನವೀಕರಣ​ : 21-06-2023 03:14 PM ಅನುಮೋದಕರು: Approver


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080